ಕೆ.ವಿ.ನಾರಾಯಣ ಸ್ವಾಮಿ (ನವೆಂಬರ್ 15, 1923 - ಏಪ್ರಿಲ್ 1, 2002) ಕರ್ನಾಟಕ ಸಂಗೀತದ ಮೇರು ಗಾಯಕ.ಕೇರಳ ರಾಜ್ಯದ ಪಾಲ್ಘಾಟ್ನಲ್ಲಿ ಜನಿಸಿದ ಇವರ ನಿಜ ನಾಮಧೇಯ ಪಾಲ್ಘಾಟ್ ಕೊಲ್ಲಂಗೋಡ್ ವಿಶ್ವನಾಥ ರಾಮನಾರಾಯಣನ್.ಇವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ರವರ ಶಿಷ್ಯರು. ಇವರು ಭಾರತದೆಲ್ಲೆಡೆಯಲ್ಲದೆ ಅಮೆರಿಕ ಮುಂತಾದ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಕರ್ನಾಟಕ ಸಂಗೀತವನ್ನು ವಿಶ್ವಕ್ಕೆ ಪರಿಚಯಿಸಿದವರಲ್ಲಿ ಅಗ್ರಗಣ್ಯರು.ಇವರು ಪುಲ್‍ಬೈಟ್ ವಿದ್ಯಾರ್ಥಿ ವೇತನವನ್ನು ಪಡೆದ ಭಾರತದ ಮೊದಲ ಶಾಸ್ತ್ರೀಯ ಸಂಗೀತಗಾರರು.ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2012-07-22 ವೇಬ್ಯಾಕ್ ಮೆಷಿನ್ ನಲ್ಲಿ.